ದಿನಾಂಕ 29/01/2023 ರಂದು ಸಮೃದ್ಧ ಅಂಗವಿಕಲರ ಸಂಸ್ಥೆಗೆ ಪ್ರಯತ್ನ ಸಂಸ್ಥೆಯಿಂದ ಅವಶ್ಯಕ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ಪ್ರಯತ್ನ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಸಮೃದ್ಧ ಅಂಗವಿಕಲರ ಸಂಸ್ಥೆಗೆ ಅವಶ್ಯಕತೆ ಇರುವ ಆಫೀಸ್, ಹಾಗೂ ಸಂಗೀತ, ಮತ್ತು ಕಿಚನ್ ಹಾಗೂ ಇತರೆ ವಿವಿಧ ಸಾಮಗ್ರಿಗಳನ್ನು ವಿತರಿಸಿ ಹಾಗೂ ಪ್ರಯತ್ನ ಸಂಸ್ಥೆಯ ಎಲ್ಲಾ ಸದಸ್ಯರು ನಮ್ಮ ಕೆಲಸ ಕಾರ್ಯಗಳನ್ನು ಮೆಚ್ಚಿ ಮುಂದಿನ ದಿನಗಳಲ್ಲಿ ನಮ್ಮ ಜೊತೆಗೆ ಕೈಜೋಡಿಸಿ ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು ಆದ್ದರಿಂದ ಪ್ರಯತ್ನ ಸಂಸ್ಥೆಯ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಗೆ ನಮ್ಮ ಸಮೃದ್ಧ ಅಂಗವಿಕಲರ ಸಂಸ್ಥೆಯ ಪರವಾಗಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಹೃದಯ ಸ್ಪರ್ಶಿ ಧನ್ಯವಾದಗಳು ಪ್ರಯತ್ನ ಸಂಸ್ಥೆಯೊಂದಿಗೆ ನಮ್ಮನ್ನು ಬೆಸೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಶ್ರೀಮತಿ ಶಾಂತ ಆಚಾರ್ ಮೇಡಂ ಅವರಿಗೆ ವಿಶೇಷವಾಗಿ ಸಂಸ್ಥೆಯ ಪರವಾಗಿ ಧನ್ಯವಾದಗಳು