ಸಮೃದ್ಧ ಅಂಗವಿಕಲರ ಸಂಸ್ಥೆ ಶಾಹುನಗರ್ ಬೆಳಗಾವಿ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಂ ದರ್ಪನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10/9/2023 ರಂದು SG ಬಾಳೆಕುಂದ್ರಿ ಸಭಾಂಗಣದಲ್ಲಿ ಜರುಗಿದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 134 ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಬೆಳಗಾವಿಯ ವಿವಿಧ ಕಾಲೇಜುಗಳ ಪ್ರಾಚಾರ್ಯರಿಗೆ ಹಾಗೂ ದಿವ್ಯಾಂಗ ಸರಕಾರಿ ನೌಕರರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಕಾರ್ಯಕ್ರಮದ ಉಪಸ್ಥಿತಿಯನ್ನು ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಮ ನಿಕ್ ಪ್ರಭು ಗುರುಸಿದ್ಧ ಸ್ವಾಮೀಜಿ ಕಾರಂಜಿ ಮಠ ಬೆಳಗಾವಿ, ಮುಖ್ಯ ಅತಿಥಿಗಳು ಶ್ರೀಯುತ ಲಕ್ಷ್ಮಣ್ ಬಾಬಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಳಗಾವಿ, ಶ್ರೀಯುತ ಶಂಕರ್ ಗುಡಸ್ ಸಂಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷರು ಲಿಂಗಾಯತ ಸಂಘಟನೆ ಬೆಳಗಾವಿ, ಶ್ರೀಯುತ ರಾಜು ಬೋರಗಾವಿ ಶ್ರೇಷ್ಠ ಉದ್ಯಮಗಾರರು ಸಂಕೇಶ್ವರ್, ಶ್ರೀಯುತ ಕೃಷ್ಣ ಗಾಡಿವಡ್ಡರ್ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು ಕರಡಿಗುದ್ದಿ ಬೆಳಗಾವಿ, ಶ್ರೀಯುತ ರಾವಸಾಬ್ ಶಿರಹಟ್ಟಿ ವ್ಯವಸ್ಥಾಪಕರು ನಗರ ನಿರಾಶ್ರಿತರ ಕೇಂದ್ರ ಬೆಳಗಾವಿ, ಶ್ರೀ ಶಿವನಗೌಡ ಪಾಟೀಲ್ ಅಧ್ಯಕ್ಷರು ಸಮೃದ್ಧ ಅಂಗವಿಕಲರ ಸಂಸ್ಥೆ ಶಾವು ನಗರ್ ಬೆಳಗಾವಿ, ಶ್ರೀ ಪ್ರಶಾಂತ ಪೋತದಾರ ಕಾರ್ಯದರ್ಶಿಗಳು ಸಮೃದ್ಧ ಅಂಗವಿಕಲರ ಸಂಸ್ಥೆ ಶಾಹುನಗರ್ ಬೆಳಗಾವಿ, ಶ್ರೀಮತಿ ಸೌಮ್ಯ ಪಾಟೀಲ್ ಉಪಾಧ್ಯಕ್ಷರು ರೋಟರಿ ಕ್ಲಬ್ ಆಫ್ ಬೆಳಗಾಂ ದರ್ಪನ್, ವಿಜಯಲಕ್ಷ್ಮಿ ಮನಿಕೇರಿ ಕಾರ್ಯದರ್ಶಿಗಳು ರೋಟರಿ ಕ್ಲಬ್ ಆಫ್ ಬೆಳಗಾಂ ದರ್ಪನ್, ಕಾರ್ಯಕ್ರಮದ ಕನಾದ್ಯಕ್ಷತೆಯನ್ನು ಶ್ರೀಯುತ ಸುರೇಶ್ ಪಟ್ಟೇದ ಸಹಾಯಕ ಪ್ರಾಧ್ಯಾಪಕರು ರಾಜ್ಯಶಾಸ್ತ್ರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಎಡಹಳ್ಳಿ ಬಾಗಲಕೋಟೆ ಅವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ವೇದಿಕೆಯ ಮೇಲೆ ಆಸೀನರಾದ ಗಣ್ಯರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಅಂಗವಿಕಲರ ಈ ಪ್ರೇರಣ ದಾಯಕ ಕಾರ್ಯವನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿ ಮಹೋದಯರು ಬೆಳಗಾವಿಯ ಶಾಲಾ ಕಾಲೇಜುಗಳ ಶಿಕ್ಷಕರು ಪ್ರಾಧ್ಯಾಪಕ ಪ್ರಚ್ಯರ್ಯರನ್ನು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಂದ ಸರಕಾರಿ ನೌಕರರನ್ನು ಸತ್ಕರಿಸಿ ಸದಾ ಸಂಸ್ಥೆಯೊಂದಿಗೆ ಇರುತ್ತೇವೆಂದು ಭರವಸೆ ನೀಡಿದರು. ಗಣಾಧ್ಯಕ್ಷತೆ ವಹಿಸಿದ ಶ್ರೀಯುತ ಸುರೇಶ್ ಪಟೇಡ್ ಅವರು ಸಂಸ್ಥೆಯ ಪ್ರಮುಖ ದ್ಯೆಯವದ ವಿಕಲಚೇತನರನ್ನು ಸ್ವಾವಲಂಬಿನ್ನಾಗಿಸುವ ಸಂಸ್ಥೆಯ ಸಂಕಲ್ಪ ಪ್ರಸಾದಾಯಕವೆಂದು ನುಡಿದರು. ಕಾರ್ಯಕ್ರಮವನ್ನು ಪ್ರಶಾಂತ್ ಪೂದ್ದಾರ್ ಸ್ವಾಗತಿಸಿದರು, ರಾಜು ಸೊಂಟಕ್ಕಿ ಅವರು ವಂದಿಸಿದರು ಲಕ್ಷ್ಮಿ ಕರುವಿನಕಬ್ ನಿರೂಪಿಸಿದರು.